ಗ್ರ್ಯಾನ್ ಟ್ಯುರಿಸ್ಮೊ ಫೇಸ್‌ಲಿಫ್ಟ್ ಕಾರು ಬಿಡುಗಡೆಗೊಳಿಸಿದ ಬಿಎಂಡಬ್ಲ್ಯು | ವಿವರಣೆ ಹಾಗೂ ಇನ್ನಿತರ ವಿವರಗಳು

2021-04-10 1,069

ಜರ್ಮನಿ ಮೂಲದ ಬಿಎಂಡಬ್ಲ್ಯು ಕಂಪನಿಯು ತನ್ನ ಹೊಸ 6 ಸೀರೀಸ್ ಗ್ರ್ಯಾನ್ ಟ್ಯುರಿಸ್ಮೊ ಫೇಸ್‌ಲಿಫ್ಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ ರೂ.67.90 ಲಕ್ಷಗಳಿಂದ ರೂ.77.90 ಲಕ್ಷಗಳಾಗಿದೆ.

ಫೇಸ್‌ಲಿಫ್ಟ್ ಆವೃತ್ತಿಯು ರಿಫ್ರೆಶ್ ಮಾಡಲಾದ ವಿನ್ಯಾಸ, ಹೆಚ್ಚು ಎಕ್ವಿಪ್ ಮೆಂಟ್ ಹಾಗೂ ಅಪ್ ಡೇಟ್ ಮಾಡಲಾದ ಎಂಜಿನ್ ಅನ್ನು ಹೊಂದಿದೆ. ಹೊಸ 6 ಸೀರೀಸ್ ಗ್ರ್ಯಾನ್ ಟ್ಯುರಿಸ್ಮೊ ಕಾರಿನಲ್ಲಿ ದೊಡ್ಡ ಗಾತ್ರದ ಕಿಡ್ನಿ ಶೇಪಿನ ಗ್ರಿಲ್, ಸ್ಲಿಮ್ ಆಗಿರುವ ಹೆಡ್‌ಲ್ಯಾಂಪ್‌, ರಿ-ಪ್ರೊಫೈಲ್ ಮಾಡಲಾದ ಬಂಪರ್‌ಗಳನ್ನು ನೀಡಲಾಗಿದೆ.

ಈ ಕಾರಿನ ಎಲ್ಲಾ ಮಾದರಿಗಳು ಟ್ರೆಪೆಜಾಯಿಡಲ್ ಎಕ್ಸಾಸ್ಟ್ ಟಿಪ್'ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿರಲಿವೆ. ಇದರ ಜೊತೆಗೆ ಈ ಕಾರಿನಲ್ಲಿ ಫ್ರೇಮ್‌ಲೆಸ್ ವಿಂಡೋ ಹಾಗೂ ಹಿಂಭಾಗದಲ್ಲಿ ಆಕ್ಟೀವ್ ಸ್ಪಾಯ್ಲರ್'ಗಳನ್ನು ನೀಡಲಾಗಿದೆ.

ಬಿಎಂಡಬ್ಲ್ಯು 6 ಸೀರೀಸ್ ಗ್ರ್ಯಾನ್ ಟ್ಯುರಿಸ್ಮೊ ಫೇಸ್‌ಲಿಫ್ಟ್ ಕಾರು ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires